Friday, February 22, 2013

ಮಗುವಿಗೆ ಜನ್ಮ ನೀಡಲು ವಯಸ್ಸಿನ ಹಂಗೇಕೆ ?




ಈಗೊಂದು ಶತಕದ ಹಿಂದೆ ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳಂತೆ ಎನ್ನುವ ಸ್ಥಿತಿ ಇತ್ತು. ಮಹಿಳೆಯರಿಗೆ ಇಷ್ಟವಿದೆಯೋ ಇಲ್ಲವೋ ನಿರಂತರವಾಗಿ ಒಂದಾದಮೇಲೊಂದರಂತೆ ಮಕ್ಕಳಿಗೆ ಜನ್ಮ ನೀಡಲೇಬೇಕಾದ ಅನಿವಾರ್ಯತೆ ಇತ್ತು. ಯಾಕೆಂದರೆ ಆಗಿನ್ನೂ ಗರ್ಭ ನಿರೋಧಕಗಳ ಅವಿಷ್ಕರಣೆಯಾಗಿರಲಿಲ್ಲ. 1960 ಸಮಯಕ್ಕೆ ಗರ್ಭನಿರೋಧಕಗಳ ಅವಿಷ್ಕಾರದಾಗ ಮಹಿಳೆಯರಿಗೆ  ತಮ್ಮದೇ ಜೀವನದ ಮೇಲೆ ಹೆಚ್ಚಿನ ಹಿಡಿತ ಸಾಧ್ಯವಾಯ್ತು. ಮಹಿಳೆಯರು ತಮಗೆ ಎಷ್ಟು ಮಕ್ಕಳು ಬೇಕು ಮತ್ತು ಯಾವಾಗ ಎಂಬುದನ್ನೂ ಸ್ವತಃ ನಿರ್ಧರಿಸಲು ಸಾಧ್ಯವಾಯ್ತು. ಇದರಿಂದ ಸಮಾಜಕ್ಕೆ ಕೂಡ ಸಾಕಷ್ಟು ಒಳಿತಾಯಿತು.
ಈತ್ತೀಚೆಗೆ ಅನ್ವೇಷಣೆಯಾದ ಕೃತಕ ಜೀವೊತ್ಪತ್ತಿ ವಿಧಾನಗಳು ಮಹಿಳೆಯರಿಗೆ ಇನ್ನಿಲ್ಲದ ಸ್ವಾತಂತ್ರ್ಯ ಕೊಡುವ ಭರವಸೆ ನೀಡುತ್ತಿವೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಸರಿಸುಮಾರು 35 ರಿಂದ 40 ಹರೆಯದ ನಂತರ ಗರ್ಭಧಾರಣೆಯ ಸಾಮರ್ಥ್ಯ ಇಳಿಮುಖವಾಗುತ್ತದೆ. ಹಾಗಾಗಿ ಮಕ್ಕಳನ್ನು ಹೊಂದುವ ಇಚ್ಚೆಯುಳ್ಳ ಮಹಿಳೆಯರು ವಯಸ್ಸಿಗಿಂತ ಮುಂಚೆಯೇ ಗರ್ಭಧಾರಣೆಯ ಬಗೆಗೆ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ವಿಜ್ನಾನದ ಹೊಸ ಹೊಸ ಸಂಶೋಧನೆಗಳು ಕೃತಕ ಗರ್ಭಧಾರಣೆಯ ಹೊಸ ಹೊಸ ವಿಧಾನಗಳು ಮಹಿಳೆಯರ ಗರ್ಭಧಾರಣೆಗೆ ವಯಸ್ಸಿನ ನಿರ್ಭಂಧ ವನ್ನು ತೊಡೆದು ಹಾಕುವ ಸೂಚನೆಗಳು ಕಾಣುತ್ತಿವೆ. ಈಗಾಗಲೇ ಸಮಾಜದ ರೂಡಿ ಬದಲಾಗುತ್ತಿದ್ದು ಬಹುಪಾಲು ಮಹಿಳೆಯರು ಗರ್ಭಧರಿಸುವ ವಯಸ್ಸು 30 ದಾಟಿದೆ. ಈಗ ಹೊಸದಾಗಿ ಆವಿಷ್ಕಾರವಾಗುತ್ತಿರುವ, ಈಗಾಗಲೇ ಆವಿಷ್ಕಾರವಾಗಿರುವ ರಿಪ್ರೊಡಕ್ಟಿವ್ ಟೆಕ್ನಾಲಜಿಗಳು ಮಹಿಳೆಯರು ಮಗುವಿಗೆ ಜನ್ಮ ನೀಡಲು ವಯಸ್ಸಿನ ನಿರ್ಭಂಧವಿಲ್ಲ ಎಂದು ಘೋಷಿಸುವ ಕಾಲ ಹತ್ತಿರದಲ್ಲಿಯೇ ಇದೆ ಎಂದು ವಿಜ್ನಾನಿಗಳು ಅಭಿಪ್ರಾಯ ಪಡುತ್ತಾರೆ. ಆದರೆ ಆವಿಷ್ಕಾರಗಳು ಸಮಾಜದ ಮುಖ್ಯವಾಹಿನಿಯಲ್ಲಿ ಅಳವಡಿಕೆಯಾಗಲ್ಪಡುವುದೋ ಇಲ್ಲವೋ ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲವಾದರೂ ಹಾಗೇನಾದರೂ ತೀರ ವಯಸ್ಸಾದ ಮೇಲೆ ಮಕ್ಕಳಿಗೆ ಜನ್ಮ ನೀಡುವ ಪರಿಪಾಠ ರೂಢಿಗೆ ಬಂದಲ್ಲಿ ಮಕ್ಕಳ ಯೋಗಕ್ಷೇಮಕ್ಕೆ ಕಷ್ಟಕರವಾಗಬಹುದು. ಆದರೆ ಬೆಳವಣಿಗೆಯಿಂದ ಸಮಾಜದ ಮೇಲಾಗುವ ಪರಿಣಾಮವನ್ನು ಈಗಲೇ ಗುರುತಿಸುವುದು ಕಷ್ಟ.
ಪ್ರಸ್ತುತ ಹಲವಾರು ಕೃತಕ ಜೀವೋತ್ಪತ್ತಿ ವಿಧಾನಗಳು ಬಳಕೆಯಲ್ಲಿವೆ. ಸಧ್ಯದ ಪರಿಸ್ತಿತಿಯಲ್ಲಿ ಸಹಜವಾಗಿ ಮಕ್ಕಳನ್ನು ಹೊಂದಲು ಸಾಧ್ಯವಾಗದವರಿಗಷ್ಟೇ ಬಳಸುತ್ತಿರುವ ರಿಪ್ರೊಡಕ್ಟಿವ್ ಟೆಕ್ನಾಲಜಿಗಳು ಬಹುಪಾಲು ಯಶಸ್ಸು ಕಂಡಿವೆ.
                                    (photo credit : twinpossible.com)

ಈಗಾಗಲೇ ಬಳಕೆಯಲ್ಲಿರುವ ಅಸ್ಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯ (ಏ‌ಆರ್‌ಟಿ) ಮೂಲಕ ಗರ್ಭಧಾರಣೆಗೆ ಅನುವು ಮಾಡಿಕೊಡುವ ಕೆಲವು ವಿಧಾನಗಳೆಂದರೆ :
1) Fertility drugs
2) Sergery (ಸಹಜ ಗರ್ಭಧಾರಣೆಗೆ ಇರುವ ತೊಡಕುಗಳನ್ನು ಶಶ್ತ್ರಚಿಕಿತ್ಸೆಯ ಮೂಲಕ ನಿವಾರಿಸುವುದು).
3) Artificial insemination
4) In Vitro Fertilisation(IVF)

 -----ದಿಕ್ಸೂಚಿ  ಮೇ 2012 ರ ಸಂಚಿಕೆಯಲ್ಲಿ ಪ್ರಕಟವಾದ ಬರಹ.

No comments:

Post a Comment